Saturday, May 18, 2013

 ಬೆಂಗಳೂರು, ಮೇ 18 : ನೂತನ ಸಚಿವ ಸಂಪುಟ ರಚನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಖಾತೆಗಳ ಹಂಚಿಕೆಯನ್ನು ಮಾಡಿ ಮುಗಿಸಿದ್ದಾರೆ. ಸಚಿವರ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಅಂತಿಮ ಒಪ್ಪಿಗೆಗಾಗಿ ಕಳುಹಿಸಿ ಕೊಡಲಾಗಿದೆ. ಹಿರಿಯ ನಾಯಕರಿಗೆ ಮಹತ್ವದ ಖಾತೆಗಳ ಜವಾಬ್ದಾರಿ ನೀಡಲಾಗಿದ್ದು, ಸಾಕಷ್ಟು ಆಲೋಚನೆ ನಡೆಸಿ ಸಿದ್ದರಾಮಯ್ಯ ಖಾತೆ ಹಂಚಿಕೆ ಮಾಡಿರುವುದು ಪ್ರಾಥಮಿಕವಾಗಿ ತಿಳಿದು ಬರುತ್ತದೆ. ಖಾತೆ ಹಂಚಿಕೆ ಮಾಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ. ಗೃಹ ಖಾತೆಯನ್ನು ಕೆ.ಜೆ.ಜಾರ್ಜ್ ಅವರಿಗೆ ವಹಿಸಲಾಗಿದ್ದು ಮತ್ತೊಮ್ಮೆ ಗೃಹ ಇಲಾಖೆ ಬೆಂಗಳೂರು ನಗರದ ಶಾಸಕರ `ಕೈ` ಸೇರಿದೆ. ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರಿಗೆ ಕಾನೂನು ಇಲಾಖೆ ಹೊಣೆ ವಹಿಸಲಾಗಿದೆ. ನೂತನ ಸಚಿವರು ಮತ್ತು ಅವರ ಖಾತೆಗಳ ವಿವರಗಳು ಕೆಳಗಿನಂತಿವೆ. 
  ಸಚಿವರು ಮತ್ತು ಖಾತೆಗಳ ಪಟ್ಟಿ 
* ಕೆ.ಜೆ.ಜಾರ್ಜ್ - ಗೃಹ 
* ಸತೀಶ್ ಜಾರಕಿಹೊಳಿ - ಅಬಕಾರಿ 
* ವಿ.ಶ್ರೀನಿವಾಸ ಪ್ರಸಾದ್ - ಕಂದಾಯ 
* ಎಚ್.ಎಸ್.ಮಹದೇವಪ್ರಸಾದ್ - ಸಹಕಾರ 
* ಡಾ.ಎಚ್.ಸಿ.ಮಹದೇವಪ್ಪ - ಲೋಕೋಪಯೋಗಿ 
* ಟಿ.ಬಿ.ಜಯಚಂದ್ರ - ಕಾನೂನು ಮತ್ತು ಸಂಸದೀಯ ವ್ಯವಹಾರ 
* ಅಂಬರೀಶ್ - ತೋಟಗಾರಿಕೆ 
* ಪ್ರಕಾಶ್ ಹುಕ್ಕೇರಿ - ಸಣ್ಣ ಕೈಗಾರಿಕೆ 
* ರಾಮಲಿಂಗಾರೆಡ್ಡಿ - ಸಾರಿಗೆ 
* ಉಮಾಶ್ರೀ - ಮಹಿಳಾ ಮತ್ತು ಮಕ್ಕಳ ಕಲ್ಯಾಣ 
* ಕೃಷ್ಣ ಭೈರೇಗೌಡ - ಕೃಷಿ 
* ಎಚ್.ಕೆ.ಪಾಟೀಲ - ಗ್ರಾಮೀಣಾಭಿವೃದ್ಧಿ 
* ರಮಾನಾಥ ರೈ - ಅರಣ್ಯ 
* ಯು.ಟಿ.ಖಾದರ್ - ಆರೋಗ್ಯ 

No comments:

Post a Comment