Friday, May 17, 2013

ಯು.ಟಿ.ಖಾದರ್ ಸೇರಿದಂತೆ 28 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ


ಬೆಂಗಳೂರು(ಮೇ 18): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 28ಸದಸ್ಯರ ಸಚಿವ ಸಂಪುಟ ಇಂದು ಶನಿವಾರ ಅಸ್ತಿತ್ವಕ್ಕೆ ಬಂದಿದೆ . ಅಳೆದು- ತೂಗಿ ಸಚಿವರ ಪಟ್ಟಿಯನ್ನು ಅಖೈರುಗೊಳಿಸಲಾಗಿದೆ. ಕಳಂಕಿತ ಸಚಿವರನ್ನ ಹೊರಗಿಡಲು ನಿರ್ಧರಿಸಲಾಗಿದೆ. ಹೀಗಾಗಿ, ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ಅವರಿಗೆ ಸಚಿವ ಭಾಗ್ಯ ಬಾಗ್ಯ ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸೋತ ಜಿ.ಪರಮೇಶ್ವರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ಸೂಚಿಸಲಾಗಿದೆ ಎಂದು ಕಾಂಗ್ರೆಸ್ಸ್ ಹೈಕಾಮಂದ್ ತಿಳಿಸಿದೆ . ಮೋಟಮ್ಮರಿಗೆ ಸಚಿವ ಸ್ಥಾನ ನೀಡದೆ ನಟಿ ಉಮಾಶ್ರೀಗೆ ಅವಕಾಶ ನೀಡಲಾಗಿದೆ….
ಪ್ರಮಾಣವಚನ   ಸ್ವೀಕರಿಸಿದ  28  ಶಾಸಕರ ಪೈಕಿ 20 ಮಂದಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗಿದೆ. ಉಳಿದ 8 ಶಾಸಕರಿಗೆ ಸಹಾಯಕ ದರ್ಜೆಯ ಸಚಿವ ಸ್ಥಾನನೀಡಿದೆ.
ಸಚಿವರ ಪಟ್ಟಿ
1) ಪ್ರಕಾಶ್ ಹುಕ್ಕೇರಿ, ಬೆಳಗಾವಿ
2) ಸತೀಶ್ ಜಾರಕಿಹೊಳಿ, ಬೆಳಗಾವಿ
3) ಶ್ಯಾಮನೂರು ಶಿವಶಂಕರಪ್ಪ, ದಾವಣಗೆರೆ
4) ಸಿ.ಎಸ್.ನಾಡಗೌಡ, ಬಿಜಾಪುರ
5) ಎಂ.ಬಿ.ಪಾಟೀಲ್, ಬಿಜಾಪುರ
6) ಖಮರುಲ್ ಇಸ್ಲಾಂ, ಗುಲ್ಬರ್ಗ
7) ಡಾ.ಶರಣಪ್ರಕಾಶ್ ಪಾಟೀಲ್, ಗುಲ್ಬರ್ಗ
8) ರಮಾನಾಥ ರೈ, ಮಂಗಳೂರು
9) ಆರ್.ವಿ.ದೇಶಪಾಂಡೆ, ಉತ್ತರ ಕನ್ನಡ
10) ಎಚ್.ಕೆ.ಪಾಟೀಲ್, ಗದಗ
11) ರಾಮಲಿಂಗಾ ರೆಡ್ಡಿ, ಬೆಂಗಳೂರು
12) ಕೆ.ಜೆ. ಜಾರ್ಜ್, ಬೆಂಗಳೂರು
13) ಕೃಷ್ಣಭೈರೇಗೌಡ, ಬೆಂಗಳೂರು
14) ದಿನೇಶ್ ಗುಂಡೂರಾವ್, ಬೆಂಗಳೂರು
15) ವಿನಯ ಕುಮಾರ್ ಸೊರಕೆ , ಕಾಪು
16) ಎಚ್.ಸಿ.ಮಹಾದೇವಪ್ಪ, ಮೈಸೂರು
17) ಅಭಯಚಂದ್ರ ಜೈನ್
18) ಪರಮೇಶ್ವರ ನಾಯಕ್, ಬಳ್ಳಾರಿ
19) ಉಮಾಶ್ರೀ, ಬಾಗಲಕೋಟೆ
20) ಆಂಜನೇಯ, ಚಿತ್ರದುರ್ಗ
21) ಟಿ.ಬಿ.ಜಯಚಂದ್ರ, ತುಮಕೂರು
22) ಅಂಬರೀಷ್, ಮಂಡ್ಯ
23) ಬಾಬುರಾವ್ ಚಿಂಚನಸೂರ್, ಯಾದಗಿರಿ
24) ವೆಂಕಟೇಶ್ ನಾಯಕ್, ರಾಯಚೂರು
25) ರಾಜಶೇಖರ್ ಪಾಟೀಲ್, ಹುಮ್ನಾಬಾದ್
26) ರಮೇಶ್‌ಕುಮಾರ್, ಕೋಲಾರ
27) ಎ.ಮಂಜು, ಹಾಸನ
28) ಯು .ಟಿ  ಖಾದರ್  ಉಳ್ಳಾಲ

No comments:

Post a Comment